ಶ್ರೀ ಶಿವಸಂಕಲ್ಪ
ಎಲ್ಲ ಚಟುವಟಿಕೆಗಳು

ಸುದ್ದಿ

ಆಗಸ್ಟ್‌ನಲ್ಲಿ ಎಂಟು ವೇದ ಗುರುಕುಲಗಳಿಗೆ ನೆರವು

ಆಗಸ್ಟ್ ತಿಂಗಳಲ್ಲಿ ಶ್ರೀ ಶಿವಸಂಕಲ್ಪ ವೃಂದವು ಕರ್ನಾಟಕದ ಎಂಟು ವೇದ ಗುರುಕುಲಗಳಿಗೆ ಧನಸಹಾಯ ನೀಡಿದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಪಾಠಶಾಲೆಗಳ ಜೊತೆ ನಿಲ್ಲುವ ಆಶಯವಿದೆ.

ನಾವು ಮಾಡಿದ್ದು

ನೆರವು ನೀಡಲಾದ ಗುರುಕುಲಗಳು: ಕೂಡಲಿ ಗುರುಕುಲ, ಶಿವಮೊಗ್ಗ; ಶ್ರೌತ ವಿಜ್ಞಾನ ಗುರುಕುಲ, ನಡಗೋಡು, ಶಿರಸಿ; ಉಮಾ ಮಧುಕೇಶ್ವರ ವೇದ ವಿದ್ಯಾ ಗುರುಕುಲ, ಬನವಾಸಿ; ಶ್ರೀ ಮಲ್ಲಿಕಾರ್ಜುನ ವೇದ ವಿದ್ಯಾ ಗುರುಕುಲ (ಜ್ಯೋತಿ ಪಾಠಶಾಲೆ), ಶಂಕರಪುರ, ಬಸವನಗುಡಿ ಬಳಿ; ಶ್ರುತಿ ಪರಂಪರಾ ಗುರುಕುಲ, ಬೆಂಗಳೂರು; ಮಲ್ಲಿಗೆ ಪಾಠಶಾಲೆ, ಮಲ್ಲೇಶ್ವರಂ; ಶ್ರೀ ಸಚ್ಚಿದಾನಂದ ಅದ್ವೈತಾಶ್ರಮ, ಬಸವೇಶ್ವರನಗರ; ಮತ್ತು ನಮ್ಮ ಸಂಪ್ರದಾಯ ಗುರುಕುಲ, ಸರ್ಜಾಪುರ. ಪೋಷಕರ ನಿರಂತರ ಶ್ರದ್ಧೆಯಿಂದ ಈ ಸೇವೆ ಬೆಳೆಯಲಿ ಎಂಬುದು ನಮ್ಮ ಪ್ರಾರ್ಥನೆ.